ಎಸ್.ಎಸ್.ಎಲ್.ಸಿ ಅಂಕಪಟ್ಟಿ ನೈಜತೆಯ ಪರಿಶೀಲನೆಗೆ ಸಂಬಂಧಿಸಿದಂತೆ ಸೂಚನೆಗಳು
Instructions Related to the SSLC Marks Card Verification
1. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ಮಾತ್ರ ನೈಜತೆಗಾಗಿ ಸಲ್ಲಿಸುವುದು. ಕೆ. ಒ .ಎಸ್ ಹಾಗೂ ಇತರೆ ಪರೀಕ್ಷೆ (ವಾಣಿಜ್ಯ, , ಡಿ.ಎಲ್.ಇ.ಡಿ, ಡಿ.ಪಿ.ಎಎಡ್, ಸಂಗೀತ, ಗಣಕಯಂತ್ರಶಿಕ್ಷಣ, ಚಿತ್ರಕಲೆ, ಅರೇಬಿಕ್)ಗಳ ಅಂಕಪಟ್ಟಿಗಳನ್ನು ನೈಜತೆಗಾಗಿ ಪರಿಗಣಿಸುವುದಿಲ್ಲ. ಈ ಅಂಕಪಟ್ಟಿಗಳ ಪರಿಶೀಲನೆಗಾಗಿ ಮಂಡಳಿಯ ಇತರೆ ಪರೀಕ್ಷಾ ವಿಭಾಗವನ್ನು ಸಂಪರ್ಕಿಸುವುದು.
Please submit the Marks card only of candidates who have passed SSLC.    KOS and Other exams (Commerce, D.El.Ed, D.P.Ed, Music, Computer Education, Drawing, Arabic) Marks cards will not be considered. Please contact Other Exams section for the verification of these marks cards.
2. ಎಸ್.ಎಸ್.ಎಲ್.ಸಿ ಅಂಕಪಟ್ಟಿ ನೈಜತೆಯ ಪರಿಶೀಲನೆಗಾಗಿ ಪ್ರಸ್ತಾವನೆಯನ್ನು ನೇಮಕಾತಿ ಪ್ರಾಧಿಕಾರದಿಂದ ಮಾತ್ರ ಸಲ್ಲಿಸುವುದು. ವೈಯುಕ್ತಿಕವಾಗಿ ಅಭ್ಯರ್ಥಿಯು ಸಲ್ಲಿಸುವ ಮನವಿಯನ್ನು ಪುರಸ್ಕರಿಸುವುದಿಲ್ಲ.
For SSLC marks card verification proposal has to be sent by the Appointing authority only. Proposals sent by the candidate individually will NOT be considered.
3. ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ನೈಜತೆಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಕಂಡ ದಾಖಲೆಗಳನ್ನು 500KB ಇಂದ 01MB ರೊಳಗೆ pdf ಮಾದರಿ ಸ್ಕ್ಯಾನ್ ಮಾಡಿಟ್ಟುಕೊಂಡು ಅಪ್ಲೋಡ್ ಮಾಡುವುದು.
While applying for SSLC marks card Verification through online the following documents must be scanned which must be within 500kb to 1mb in pdf format and uploaded.
        a) ನೇಮಕಾತಿ ಪ್ರಾಧಿಕಾರದಿಂದ “ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003”
            ರವರಿಗೆ ಬರೆದಿರುವ ಕೋರಿಕೆ ಪತ್ರ
         The request letter sent by the appointing authority must be addressed to “The Director(Exams), Karnataka Secondary Education Examination Board, Malleshwaram, Bangalore-560003”
         b) ಅಭ್ಯರ್ಥಿಯ ನೇಮಕಾತಿ ಆದೇಶಪತ್ರ / ಸಂಬಂಧಿಸಿದ ದಾಖಲೆ.
         The appointment order/related document of the candidate
         c) ಅಭ್ಯರ್ಥಿಯ ಅಂಕಪಟ್ಟಿ
         Marks card of the candidate